ಇಮ್ಮಡಿ ಪುಲಕೇಶಿ: ಚಾಲುಕ್ಯ ವಂಶದ ಪ್ರಸಿದ್ಧ ದೊರೆ.(ಕ್ರಿ.ಶ 610-642) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು 200 ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು."ಇವರು ಮೂಲತಃ ಬನವಾಸಿಯಿಂದ ಬಂದ ಬೇಡ/ವಾಲ್ಮೀಕಿ ಜನಾಂಗದವರು.ಮುಂದೆ ಜೈನ ಸಂಪ್ರದಾಯ ಪಾಲಿಸಿದರು. [೧] ಕ್ರಿ.ಶ.ಸು. ೫3೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು. ಕ್ರಿ.ಶ. ೭೫೭ರ ರಾಷ್ಟ್ರಕೂಟ 'ದಂತಿದುರ್ಗ'ನು ಚಾಲುಕ್ಯ ಅರಸ 'ಇಮ್ಮಡಿ ಕೀರ್ತಿವರ್ಮ'ನನ್ನು ಯುದ್ಧದಲ್ಲಿ ಸೋಲಿಸಿ ಪ್ರಾಚೀನ ಕರ್ನಾಟಕದ ರಾಜಕೀಯ ವಲಯದಲ್ಲಿ ಚಾಲುಕ್ಯರು ವಿರಮಿಸುವಂತೆ ಮಾಡಿದನು. ಸಾರ್ವಭೌಮರಾಗಿ ಮೆರೆದ ಬಾದಾಮಿ ಚಾಲುಕ್ಯರು ಕರ್ನಾಟಕದಲ್ಲಿ ಸ್ವತಂತ್ರವಾದ ವಿಶಾಲ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದರು. ಕರ್ನಾಟಕದ ಭೌಗೋಳಿಕ ಗಡಿಗಳನ್ನು ವಿಸ್ತರಿಸಿದ ಕನ್ನಡ ಅರಸರಲ್ಲಿ ಇವರ ಪಾತ್ರ ಮಹತ್ವದ್ದು. ತಮ್ಮ ಆಡಳಿತಾವಧಿಯುದ್ದಕ್ಕೂ ಕಂಚಿ ಪಲ್ಲವರ ಜೊತೆಗೆ ಹಗೆತನ ಸಾಧಿಸಿದ ಬಾದಾಮಿ ಚಾಲುಕ್ಯರು, ಕನ್ನಡದ ಶ್ರೇಷ್ಠ ದೊರೆ 'ಇಮ್ಮಡಿ ಪುಲಕೇಶಿ'(ನೌಕಾಪಡೆಯ ಪಿತಾಮಹ)ಯನ್ನು ಕಳೆದುಕೊಂಡು ಹದಿಮೂರು ವರ್ಷಗಳ ಪರಕೀಯ ಆಡಳಿತದ ಬಿಸಿಯನ್ನು ಸಹಿಸಿದರು. ಆದರೆ ಸೋಲಿನ ಕಹಿ ಅನುಭವವನ್ನು ಇಮ್ಮಡಿ ವಿಕ್ರಮಾದಿತ್ಯನು ಪಲ್ಲವರನ್ನು ಸೋಲಿಸುವುದರ ಮೂಲಕ, ಬಾದಾಮಿ ಚಾಲುಕ್ಯ ಸಾಮ್ರಾಜ್ಯವನ್ನು ಮರುಕಟ್ಟಿದ ಕೀರ್ತಿಗೆ ಪಾತ್ರನಾದನು. ಕರ್ನಾಟಕ ಇತಿಹಾಸದಲ್ಲಿ ನಡೆದು ಹೋದ ಈ ಸೋಲು ಗೆಲುವುಗಳು ದೇಶದ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯ ಮೇಲೆ ಅಗಾಧವಾದ ಪರಿಣಾವುವನ್ನು ಬೀರಿದವು. ಮುಖ್ಯವಾಗಿ ಕಲಾ ಸಾಂಸ್ಕೃತಿಕ ಆಯಾಮಗಳು ಬದಲಾವಣೆ ಹೊಂದಿ ಆಚರಣೆಯಲ್ಲಿ ಬಂದವು.
ಆರಂಭಿಕ ಬದುಕು, ಮತ್ತು ಪಟ್ಟಕ್ಕೆ ಏರಿದ್ದು:ತನ್ನ ಪಟ್ಟಾಭಿಷೇಕವಾದ ಮೇಲೆ ಹೆಸರು ಪುಲಿಕೇಶಿ ಎಂದು ಹೆಸರು ಬದಲಾಯಿಸಿಕೊಂಡ ಎರೆಯನು ಚಾಲುಕ್ಯ ರಾಜ ಮೊದಲನೆಯ ಕೀರ್ತಿವರ್ಮನ ಮಗನು. ಕೀರ್ತಿವರ್ಮನು ಕ್ರಿ.ಶ ೫೯೭ ರಲ್ಲಿ ರಲ್ಲಿ ನಿಧನನಾದಾಗ ಎರಯನು ಚಿಕ್ಕ ಬಾಲಕ. ಕೀರ್ತಿವರ್ಮನ ಸೋದರ ಮಂಗಳೇಶನು ಎರಯನು ವಯಸ್ಕನಾಗುವವರೆಗೆ ರಾಜಪ್ರತಿನಿಧಿಯಾಗಿ ರಾಜ್ಯದ ಆಡಳಿತವನ್ನು ವಹಿಸಿಕೊಂಡನು. ಮಂಗಳೇಶನು ಸಮರ್ಥ ಆಡಳಿತಗಾರನಾಗಿದ್ದು ರಾಜ್ಯವನ್ನು ವಿಸ್ತರಿಸುವದನ್ನು ಮುಂದುವರೆಸಿದನು. ಎರೆಯನು ವಯಸ್ಸಿಗೆ ಬಂದಾಗ, ಬಹುಶಃ ಅಧಿಕಾರದ ಆಸೆಯು ಮಂಗಳೇಶನು ಚಾಲುಕ್ಯ ಸಿಂಹಾಸನವನ್ನು ರಾಜಕುಮಾರ ಎರೆಯನಿಗೆ ನಿರಾಕರಿಸಿದನು , ಮತ್ತು ತನ್ನ ಮಗನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿ ತನ್ನ ವಂಶದ ಆಳ್ವಿಕೆಯನ್ನು ಶಾಶ್ವತವಾಗಿಸುವ ಪ್ರಯತ್ನ ಮಾಡಿದನು. ಎರೆಯನು, ಬನಾ ಪ್ರದೇಶ(ಕೋಲಾರ) ದಲ್ಲಿ ಆಶ್ರಯ ಪಡೆದು ತನ್ನ ಸಹಚರರ ಸಹಾಯದಿಂದ ಸೈನ್ಯವನ್ನು ಸಂಘಟಿಸಿ ಚಿಕ್ಕಪ್ಪನ ಮೇಲೆ ಯುದ್ಧ ಘೋಷಿಸಿದನು. ಪೆದ್ದವಾಡಗೂರು ಶಾಸನದ ಪ್ರಕಾರ, ಮಂಗಳೇಶನು ಎಲಪಟ್ಟು ಸಿಂಬಿಗೆ ನಲ್ಲಿ ನಡೆದ ಯುದ್ಧದಲ್ಲಿ ಪರಾಭವಗೊಂಡು ಸತ್ತನು. ಎರೆಯನು "ಇಮ್ಮಡಿ ಪುಲಿಕೇಶಿ" ಎಂದು ಚಾಲುಕ್ಯ ಸಿಂಹಾಸನವನ್ನೇರಿದನು ಹಾಗೂ "ಚಾಲುಕ್ಯಪರಮೇಶ್ವರ" ಎಂಬ ಬಿರುದನ್ನು ಧರಿಸಿದನು, ಪುಲಿಕೇಶಿಯು ಹೀಗೆ ಬಾದಾಮಿ, ಪಾಪನಾಥ, ದುರ್ಗಾ ಮತ್ತು ಲಾಡಖಾನ ಮುಂತಾದ ಅನೇಕ ದೇವಾಲಯಗಳನ್ನು ನಿರ್ಮಿಸಿದನು. ರಾಜ್ಯಾಭಿಷೇಕದ ಬಳಿಕ, ಪುಲಿಕೇಶಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಯುದ್ಧದ ನಂತರ ಹೊಸ ಸಾಹಸದ ಕೆಲಸಗಳನ್ನು ಮಾಡುವ ಪ್ರಯತ್ನ, ಚಾಲುಕ್ಯರಿಗೆ ಐಹೊಳೆಯ ಶಿಲಾಶಾಸನದಲ್ಲಿ ಕೆತ್ತಿರುವ ೬೩೪ ಶಿಲೆಯ ಪ್ರಕಾರ, ಹೇಳುವಂತೆ, ವಿಶ್ವದಲ್ಲೆಲ್ಲಾ ಶತ್ರುಗಳ ಅಂಧಕಾರ ಹರಡಿತ್ತು. ಪುಲಿಕೇಶಿಯು ಅಪ್ಪಾಯಿಕ ಮತ್ತು ಗೋವಿಂದ ಮೊದಲಾದವರ ಚುನೌತಿಯನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಾಮಾಣಿಕರು ಮಂಗಲೇಶರನ್ನು ಸೋಲಿಸಿದ್ದರು. ಭೀಮಾನದಿಯ ತಟದಲ್ಲಿ ಪುಲಿಕೇಶಿ ಎದುರಾಳಿಗಳ ಸೈನ್ಯವನ್ನು ತಡೆದನು, ಅಪ್ಪಾಯಿಕ ರಣಭೂಮಿಯಿಂದ ಪಲಾಯನಮಾಡಿದನು. ಗೋವಿಂದನನ್ನು ಸೆರೆಹಿಡಿಯಲಾಯಿತು. ತನ್ನ ವಿಜಯವನ್ನು ಘೋಷಿಸಿ ಆಚರಿಸಲು ಇಮ್ಮಡಿ ಪುಲಿಕೇಶಿಯು ಒಂದು ವಿಜಯಸ್ಥಂಭವನ್ನು ಕಟ್ಟಿಸಿದನು.
ಪುಲಿಕೇಶಿಯ ಬೆಳವಣಿಗೆ:ಎರಡನೇ ಪುಲಿಕೇಶಿಯ ತಂದೆ ಕೀರ್ತಿವರ್ಮ. ಪುಲಿಕೇಶಿಯು ಚಿಕ್ಕವನಿರುವಾಗಲೇ ತೀರಿಕೊಂಡ ಕಾರಣ, ಚಾಲುಕ್ಯ ಸಾಮ್ರಾಜ್ಯದ ಆಡಳಿತವನ್ನು, ಪುಲಿಕೇಶಿಯ ಚಿಕ್ಕಪ್ಪ ಮಂಗಳೇಶನು ಅಧಿಕಾರವಹಿಸಿಕೊಂಡು, ಆಡಳಿತ ನಡೆಸಿಕೊಂಡು ಬಂದನು. ಚಿಕ್ಕಂದಿನಲ್ಲಿಯೇ ಪಾಲಕರಿಲ್ಲದ ಪುಲಿಕೇಶಿಗೆ ಅಜ್ಜಿಯಿಂದಲೇ ಶಿಕ್ಷಣ, ಸಂಸ್ಕಾರ, ರಾಜ ಪರಂಪರೆಯ ನಡತೆಗಳೆಲ್ಲವೂ ದೊರೆತು ಅಪ್ರತಿಮ ಯುದ್ಧವೀರನಾಗಿ ಹೊರ ಹೊಮ್ಮಲು ಕಾರಣವಾಯಿತು.
ಪುಲಿಕೇಶಿಯು ಬೆಳೆದು ದೊಡ್ಡವನಾದ ಮೇಲೆ, ತಂದೆಯ ಸಿಂಹಾಸನವನ್ನು ಬಿಟ್ಟು ಕೊಡುವಂತೆ ಕೇಳಿಕೊಂಡಾಗ,ಮಂಗಳೇಶನು ಅದಕ್ಕೆ ವಿರೋಧ ವ್ಯಕ್ತಪಡಿಸಿದನು. ಮುಂದೆ ತನ್ನ ಅಧಿಕಾರಕ್ಕೆ ಸಂಚಕಾರ ಬರುವುದೆಂದು ತಿಳಿದು, ಪುಲಿಕೇಶಿಯನ್ನು ಮುಗಿಸಿ ಬಿಡುವ ಯೋಜನೆಯಲ್ಲಿ ತೊಡಗಿದ್ದ. ಚಾಣಾಕ್ಷ ಮತಿ ಪುಲಿಕೇಶಿಗೆ ಇದರ ಸುಳಿವು ದೊರೆಯುತ್ತಿದ್ದಂತೆಯೇ ಮಂಗಳೇಶನನ್ನು ಕ್ರಿ ಶ 610 ರಲ್ಲಿ ಕೊಂದು, ಚಾಲುಕ್ಯ ಸಾಮ್ರಾಜ್ಯದ ಅಧಿಪತಿಯಾದನು. ಇದು ಅನಂತಪುರ ಕೋಟೆಯಲ್ಲಿ ನಡೆದ ಘಟನೆ.
ಪುಲಿಕೇಶಿಯ ಯುದ್ದಗಳು ಮತ್ತು ಸಾಮ್ರಾಜ್ಯ ವಿಸ್ತರಣೆ ಮಂಗಳೇಶನ ಆಪ್ತರೊಂದಿಗಿನಯುದ್ಧ:ಮುಂದಿನ ಆಡಳಿತ ಸುಗಮವಾಗಿರಲಿಲ್ಲ. ತನ್ನ ಸುತ್ತಮುತ್ತಲೂ ವೈರಿಗಳ ಪಡೆ ಎದ್ದು ನಿಂತಿತ್ತು. ಮಂಗಳೇಶನ ಆಪ್ತರೆಲ್ಲ ಸೇಡಿಗಾಗಿ ಹವಣಿಸುತ್ತಿದ್ದರು. ಅದನ್ನರಿತ ಪುಲಿಕೇಶಿ ಜಾಗೃತನಾಗಿ, ಭೀಮಾ ನದಿ ತೀರದಲ್ಲಿ, ಮಂಗಳೇಶನ ಆಪ್ತರಾದ ಗೋವಿಂದ ಮತ್ತು ಅಪ್ಪಯ್ಯ ರನ್ನು ಹೀನಾಯವಾಗಿ ಸೋಲಿಸಿದ. ಇಲ್ಲಿಂದ ಶುರುವಾದ ಅವನ ಸಾಮ್ರಾಜ್ಯ ವಿಸ್ತರಣಾ ಕಾರ್ಯ ಬಲು ರೋಚಕವಾದುದು.
ಬನವಾಸಿ ಮತ್ತು ತಲಕಾಡು ವಶ:ತಂದೆಯ ಕಾಲದಲ್ಲಿದ್ದ ಭೂಭಾಗವನ್ನುವಿಸ್ತರಿಸಲು ನಿರ್ಧರಿಸಿದ ಪುಲಿಕೇಶಿಯು, ಕದಂಬರ ಬನವಾಸಿ, ತಲಕಾಡಿನ ಗಂಗರು, ಅಳುಪರ ಮೇಲೆ ಯುದ್ಧ ಸಾರಿದನುಅಲ್ಲಿಯೂ ಕೂಡಾ ಅಭೂತಪೂರ್ವ ಯಶ ದೊರೆಯಿತು. ಅವರೆಲ್ಲ ಯುದ್ಧದ ನಂತರ ಪುಲಿಕೇಶಿಯೊಂದಿಗೆ ಮೈತ್ರಿ ಮಾಡಿಕೊಂಡು ಮುಂದುವರೆದರು.
ಪಲ್ಲವ ದೊರೆ ಮಹೇಂದ್ರ ವರ್ಮನೊಂದಿಗೆ ಯುದ್ಧ: ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದಾದ ಪಲ್ಲವರು, ಸುದೀರ್ಘ ಕಾಲ ಆಳಿದ ರಾಜ ಮನೆತನ. ಅದು ಕದಂಬರ ಕಾಲಕ್ಕಿಂತಲೂ ಮುಂಚೆ. ಅವರು ಕದಂಬರ ಮೇಲೆ ಆಕ್ರಮಣ ಮಾಡುತ್ತಲೇ ಬಂದವರು. ನಂತರ ಅದು ಚಾಲುಕ್ಯರ ತನಕವೂ ನಡೆದು ಬಂತು. ಯಾವಾಗ ಪುಲಿಕೇಶಿ ಅಧಿಕಾರಕ್ಕೆ ಬಂದನೋ ಆ ವೇಳೆಗಾಗಲೇ ಪಲ್ಲವರ ದೊರೆ ಮಹೇಂದ್ರವರ್ಮನು ಸಂಘರ್ಷಕ್ಕಿಳಿದನು. ಆ ಸಮಯ ತುಂಬಾ ಕ್ಲಿಷ್ಟಕರವಾಗಿತ್ತು. ಬಲಾಡ್ಯ ಪಲ್ಲವರ ಮೇಲೆರಗಿದ ಪುಲಿಕೇಶಿಯು, ಅವರ ರಾಜಧಾನಿ ಕಂಚಿಯನ್ನು ಹೊರತು ಪಡಿಸಿ ಬಹುಪಾಲು ರಾಜ್ಯವನ್ನು ವಶಪಡಿಸಿಕೊಂಡನು.
Post a Comment
0Comments